ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಳ್ಳುವ ವಿಧಾನಗಳನ್ನು ವಿವರಿಸುವ ಶಾಸ್ತ್ರ. ಮಾನವ ಮೈಮನಸ್ಸುಗಳು ಎರಡನ್ನೂ ಚೆನ್ನಾಗಿರಿಸಲು ನೆರವಾಗುವ ಇನ್ನೂ ಅನೇಕವಿಭಾಗಗಳೂ ಇದರಲ್ಲಿ ಸೇರುತ್ತವೆ. ಎಲ್ಲಕ್ಕೂ ಮುಖ್ಯವಾಗಿ, ಒಬ್ಬರ ವಿಚಾರವಾಗಿನ ಆಹಾರ, ನೀರು ಮತ್ತಿತರ ಪಾನಗಳು, ಉಡುಗೆತೊಡುಗೆಗಳು, ಕೆಲಸ, ವ್ಯಾಯಾಮ, ನಿದ್ದೆ, ಮೈಚೊಕ್ಕಟತೆ, ತಂಬಾಕು, ಮಂಪರಕಾರಿಗಳು ಇತ್ಯಾದಿಗಳ ಹೆಚ್ಚಿನ ಚಟಗಳೂ ಇದರಲ್ಲಿ ವಿವರವಾಗಿ ತಿಳಿಸಿಕೊಡುವುದು. ಒಬ್ಬೊಬ್ಬರ ಆರೋಗ್ಯ ಚೆನ್ನಾಗಿರಲು ಬೇಕೇಬೇಕಿರುವ ಜನಾರೋಗ್ಯದಲ್ಲಿ ಹವಾಗುಣ, ಭೂಮಿಗುಣ, ವಾಸದ ಮನೆ, ವಸತಿಗಳು, ಅವುಗಳ ಸಾಮಾನು ಜೋಡಣೆ, ರೀತಿಗಳು, ಮನೆಗಳಲ್ಲಿ ಗಾಳಿ ಬೆಳಕುಗಳ ಏರ್ಪಾಡು; ಕಸಕಡ್ಡಿ, ಕೊಳಕುಕೊಚ್ಚೆಗಳ ಸಾಗಣೆ, ರೋಗಗಳ ಸಂಭವ, ಅವುಗಳ ತಡೆಗಳ ವೈದ್ಯಕ ತಿಳಿವು, ಸತ್ತವರ ವಿಲೇವಾರಿ ಇವೂ ಸೇರಿವೆ. ಈ ವಿಚಾರಗಳನ್ನೆಲ್ಲ ಬೇರೆಬೇರೆ ಲೇಖನಗಳಲ್ಲಿ ಕೊಟ್ಟಿದೆ. ಏಕಾಣುಜೀವಿಶಾಸ್ತ್ರ; ಕೈಗಾರಿಕಾ ವೈದ್ಯ.

ವರ್ಗ: ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ